Dr Aishwarya N UdupaMBBS, MD · General MedicineConsultation details
← All health guides

Blood pressure care · Bilingual patient guide

High blood pressure: accurate readings and warning signs

High blood pressure often causes no symptoms. One reading alone does not establish a diagnosis; correctly measured, repeated readings and your overall cardiovascular risk matter.

English

Measure correctly

  • Avoid caffeine, tobacco, and exercise for 30 minutes beforehand
  • Empty your bladder and rest quietly for 5 minutes
  • Sit with your back supported, feet flat, and legs uncrossed
  • Use a correctly sized upper-arm cuff on bare skin
  • Take two readings one minute apart and record both

Arrange a review

  • If home or clinic readings remain high on repeated checks
  • If you develop headache, dizziness, swelling, or reduced exercise tolerance
  • If medicines cause faintness, weakness, or unusually low readings
  • Do not stop prescribed blood-pressure medicine without medical advice

When to seek urgent care

If a reading is above 180/120 mmHg, rest for 5 minutes and repeat it. Seek emergency care immediately if it remains very high with chest pain, breathlessness, weakness or numbness, vision change, difficulty speaking, severe headache, or confusion.

ಕನ್ನಡ

ಅಧಿಕ ರಕ್ತದೊತ್ತಡ: ಸರಿಯಾದ ಅಳತೆ ಮತ್ತು ಎಚ್ಚರಿಕೆಯ ಲಕ್ಷಣಗಳು

ಅಧಿಕ ರಕ್ತದೊತ್ತಡಕ್ಕೆ ಸಾಮಾನ್ಯವಾಗಿ ಲಕ್ಷಣಗಳಿರುವುದಿಲ್ಲ. ಒಂದೇ ಅಳತೆಯಿಂದ ರೋಗನಿರ್ಣಯ ಮಾಡಲಾಗುವುದಿಲ್ಲ; ಸರಿಯಾದ ವಿಧಾನದಲ್ಲಿ ಮರುಮರು ಅಳತೆ ಮತ್ತು ಹೃದಯ ಹಾಗೂ ರಕ್ತನಾಳಗಳ ಒಟ್ಟಾರೆ ಅಪಾಯ ಮುಖ್ಯ.

ಸರಿಯಾಗಿ ಅಳೆಯುವ ವಿಧಾನ

  • 30 ನಿಮಿಷ ಮೊದಲು ಕಾಫಿ/ಚಹಾ, ತಂಬಾಕು ಮತ್ತು ವ್ಯಾಯಾಮ ತಪ್ಪಿಸಿ
  • ಮೂತ್ರಾಶಯ ಖಾಲಿ ಮಾಡಿ 5 ನಿಮಿಷ ಶಾಂತವಾಗಿ ಕುಳಿತುಕೊಳ್ಳಿ
  • ಬೆನ್ನಿಗೆ ಆಧಾರ ನೀಡಿ, ಪಾದಗಳನ್ನು ನೆಲದ ಮೇಲೆ ಇಟ್ಟು, ಕಾಲುಗಳನ್ನು ಅಡ್ಡ ಹಾಕದೆ ಕುಳಿತುಕೊಳ್ಳಿ
  • ಸರಿಯಾದ ಗಾತ್ರದ ಮೇಲ್ಬಾಹು ಕಫ್ ಅನ್ನು ಚರ್ಮದ ಮೇಲೆ ಹಾಕಿ
  • ಒಂದು ನಿಮಿಷ ಅಂತರದಲ್ಲಿ ಎರಡು ಅಳತೆ ತೆಗೆದು ಎರಡನ್ನೂ ದಾಖಲಿಸಿ

ವೈದ್ಯಕೀಯ ಪರಿಶೀಲನೆ ಪಡೆಯಿರಿ

  • ಮನೆ ಅಥವಾ ಕ್ಲಿನಿಕ್ ಅಳತೆಗಳು ಮರುಮರು ಹೆಚ್ಚಾಗಿದ್ದರೆ
  • ತಲೆನೋವು, ತಲೆಸುತ್ತು, ಊತ ಅಥವಾ ವ್ಯಾಯಾಮ ಸಾಮರ್ಥ್ಯ ಕಡಿಮೆಯಾದರೆ
  • ಔಷಧಿಯಿಂದ ಮೂರ್ಚೆ ಭಾವ, ದುರ್ಬಲತೆ ಅಥವಾ ಅತೀ ಕಡಿಮೆ ಅಳತೆ ಬಂದರೆ
  • ವೈದ್ಯರ ಸಲಹೆಯಿಲ್ಲದೆ ಸೂಚಿಸಿದ BP ಔಷಧಿಯನ್ನು ನಿಲ್ಲಿಸಬೇಡಿ

ಯಾವಾಗ ತುರ್ತು ಚಿಕಿತ್ಸೆ ಪಡೆಯಬೇಕು?

BP 180/120 mmHg ಕ್ಕಿಂತ ಹೆಚ್ಚಿದ್ದರೆ 5 ನಿಮಿಷ ವಿಶ್ರಾಂತಿ ಪಡೆದು ಮರುಅಳೆಯಿರಿ. ಇನ್ನೂ ಹೆಚ್ಚಿದ್ದು ಎದೆ ನೋವು, ಉಸಿರಾಟದ ತೊಂದರೆ, ದುರ್ಬಲತೆ/ಮರಗಟ್ಟುವಿಕೆ, ದೃಷ್ಟಿ ಬದಲಾವಣೆ, ಮಾತಿನ ತೊಂದರೆ, ತೀವ್ರ ತಲೆನೋವು ಅಥವಾ ಗೊಂದಲ ಇದ್ದರೆ ತಕ್ಷಣ ತುರ್ತು ಚಿಕಿತ್ಸೆಗೆ ಹೋಗಿ.

Medical references

WHO · American Heart Association

This information is educational and does not replace an individual consultation, examination, diagnosis, or treatment plan.

View consultation information