Preventive health · Bilingual patient guide
Preventive health check-ups: useful screening without unnecessary tests
A useful health check is based on age, sex, symptoms, family history, lifestyle, previous results, medicines, and existing conditions. More tests are not always better; screening should be chosen because it is likely to improve health outcomes.
English
A practical preventive review may include
- Blood pressure, weight trend, and cardiovascular risk assessment
- Blood glucose and lipid testing when appropriate for age and risk
- Tobacco and alcohol use, diet, physical activity, sleep, and mental well-being
- Vaccination review and dental, vision, or hearing assessment when indicated
- Age-, sex-, and risk-appropriate screening for oral, breast, cervical, and colorectal cancers
Prepare for your check-up
- Bring previous reports and a complete list of prescription medicines, supplements, and allergies
- Share family history of early heart disease, stroke, diabetes, cancer, kidney disease, or inherited illness
- Mention new symptoms, menstrual or bleeding concerns, changes in weight, and sleep or mood problems
- Ask which tests are necessary now, how often they should be repeated, and what result would change management
- Avoid repeating large test packages simply because they were previously advertised or bundled
When to seek urgent care
Screening is intended for people without urgent symptoms. Do not wait for a routine check-up if you have chest pain, severe breathlessness, fainting, sudden facial droop or limb weakness, difficulty speaking, active bleeding, confusion, or another rapidly worsening symptom.
ಕನ್ನಡ
ತಡೆಗಟ್ಟುವ ಆರೋಗ್ಯ ತಪಾಸಣೆ: ಅಗತ್ಯ ಪರೀಕ್ಷೆಗಳು, ಅನಗತ್ಯ ಪರೀಕ್ಷೆಗಳಿಲ್ಲದೆ
ಉಪಯುಕ್ತ ಆರೋಗ್ಯ ತಪಾಸಣೆ ವಯಸ್ಸು, ಲಿಂಗ, ಲಕ್ಷಣಗಳು, ಕುಟುಂಬದ ಇತಿಹಾಸ, ಜೀವನಶೈಲಿ, ಹಿಂದಿನ ವರದಿಗಳು, ಔಷಧಿಗಳು ಮತ್ತು ಈಗಿರುವ ಕಾಯಿಲೆಗಳ ಆಧಾರದ ಮೇಲೆ ಇರಬೇಕು. ಹೆಚ್ಚು ಪರೀಕ್ಷೆಗಳೇ ಉತ್ತಮವೆಂದಲ್ಲ; ಆರೋಗ್ಯ ಫಲಿತಾಂಶ ಸುಧಾರಿಸಲು ಸಹಾಯ ಮಾಡುವ ಪರೀಕ್ಷೆಗಳನ್ನು ಮಾತ್ರ ಆಯ್ಕೆಮಾಡಬೇಕು.
ತಡೆಗಟ್ಟುವ ಆರೋಗ್ಯ ಪರಿಶೀಲನೆಯಲ್ಲಿ ಇರಬಹುದಾದ ಅಂಶಗಳು
- ರಕ್ತದೊತ್ತಡ, ತೂಕದ ಬದಲಾವಣೆ ಮತ್ತು ಹೃದಯ-ರಕ್ತನಾಳದ ಅಪಾಯದ ಮೌಲ್ಯಮಾಪನ
- ವಯಸ್ಸು ಮತ್ತು ಅಪಾಯಕ್ಕೆ ಅನುಗುಣವಾಗಿ ರಕ್ತದ ಸಕ್ಕರೆ ಮತ್ತು ಲಿಪಿಡ್ ಪರೀಕ್ಷೆಗಳು
- ತಂಬಾಕು/ಮದ್ಯ ಬಳಕೆ, ಆಹಾರ, ದೈಹಿಕ ಚಟುವಟಿಕೆ, ನಿದ್ರೆ ಮತ್ತು ಮಾನಸಿಕ ಆರೋಗ್ಯದ ಪರಿಶೀಲನೆ
- ಅಗತ್ಯವಿದ್ದರೆ ಲಸಿಕೆಗಳು, ಹಲ್ಲು, ದೃಷ್ಟಿ ಮತ್ತು ಶ್ರವಣದ ಪರಿಶೀಲನೆ
- ವಯಸ್ಸು, ಲಿಂಗ ಮತ್ತು ಅಪಾಯಕ್ಕೆ ಅನುಗುಣವಾಗಿ ಬಾಯಿ, ಸ್ತನ, ಗರ್ಭಕಂಠ ಮತ್ತು ದೊಡ್ಡಕರುಳಿನ ಕ್ಯಾನ್ಸರ್ ತಪಾಸಣೆ
ತಪಾಸಣೆಗೆ ಸಿದ್ಧರಾಗುವ ವಿಧಾನ
- ಹಿಂದಿನ ವರದಿಗಳು, ಎಲ್ಲಾ ಔಷಧಿಗಳು/ಪೂರಕಗಳ ಪಟ್ಟಿ ಮತ್ತು ಅಲರ್ಜಿ ಮಾಹಿತಿಯನ್ನು ತರಿರಿ
- ಕುಟುಂಬದಲ್ಲಿ ಕಡಿಮೆ ವಯಸ್ಸಿನಲ್ಲೇ ಹೃದಯ ಕಾಯಿಲೆ, ಪಾರ್ಶ್ವವಾಯು, ಮಧುಮೇಹ, ಕ್ಯಾನ್ಸರ್, ಮೂತ್ರಪಿಂಡ ಅಥವಾ ವಂಶಪಾರಂಪರ್ಯ ಕಾಯಿಲೆ ಇದ್ದರೆ ತಿಳಿಸಿ
- ಹೊಸ ಲಕ್ಷಣಗಳು, ಮಾಸಿಕ/ರಕ್ತಸ್ರಾವದ ಸಮಸ್ಯೆ, ತೂಕದ ಬದಲಾವಣೆ, ನಿದ್ರೆ ಅಥವಾ ಮನಸ್ಥಿತಿಯ ಸಮಸ್ಯೆಗಳನ್ನು ತಿಳಿಸಿ
- ಈಗ ಯಾವ ಪರೀಕ್ಷೆ ಅಗತ್ಯ, ಎಷ್ಟು ಅವಧಿಗೊಮ್ಮೆ ಮಾಡಬೇಕು ಮತ್ತು ಫಲಿತಾಂಶದಿಂದ ಚಿಕಿತ್ಸೆಯಲ್ಲಿ ಏನು ಬದಲಾಗುತ್ತದೆ ಎಂದು ಕೇಳಿ
- ಜಾಹೀರಾತು ಅಥವಾ ಪ್ಯಾಕೇಜ್‌ನಲ್ಲಿದೆ ಎಂಬ ಕಾರಣಕ್ಕೆ ದೊಡ್ಡ ಪರೀಕ್ಷಾ ಪ್ಯಾಕೇಜ್‌ಗಳನ್ನು ಮರುಮರು ಮಾಡಿಸಬೇಡಿ
ಯಾವಾಗ ತುರ್ತು ಚಿಕಿತ್ಸೆ ಪಡೆಯಬೇಕು?
ತಪಾಸಣೆ ತುರ್ತು ಲಕ್ಷಣಗಳಿಲ್ಲದವರಿಗಾಗಿ. ಎದೆ ನೋವು, ತೀವ್ರ ಉಸಿರಾಟದ ತೊಂದರೆ, ಮೂರ್ಚೆ, ಮುಖ ಒಂದು ಬದಿಗೆ ಜೋತುಬೀಳುವುದು ಅಥವಾ ಕೈ/ಕಾಲಿನ ಹಠಾತ್ ದುರ್ಬಲತೆ, ಮಾತಿನ ತೊಂದರೆ, ಸಕ್ರಿಯ ರಕ್ತಸ್ರಾವ, ಗೊಂದಲ ಅಥವಾ ವೇಗವಾಗಿ ಹೆಚ್ಚುತ್ತಿರುವ ಲಕ್ಷಣ ಇದ್ದರೆ ಸಾಮಾನ್ಯ ತಪಾಸಣೆಗಾಗಿ ಕಾಯದೆ ತಕ್ಷಣ ಚಿಕಿತ್ಸೆ ಪಡೆಯಿರಿ.
Medical references
National Programme for Prevention and Control of NCDs, India · WHO – Noncommunicable diseases
This information is educational and does not replace an individual consultation, examination, diagnosis, or treatment plan.
View consultation information